ಶ್ರೀ ದುರ್ಗಾಪರಮೇಶ್ವರಿ ದೇವಾಲಯ:ಬೆಳ್ಳೂರು, ಹುದಿಕೇರಿ

ದೇವಾಲಯದ ಬಗ್ಗೆ


ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಬೆಳ್ಳೂರು, ಹುದಿಕೇರಿ: ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು.

ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಬೆಳ್ಳೂರು ಗ್ರಾಮದಲ್ಲಿ ಸಾವಿರದ ಐನೂರು ವರ್ಷಗಳಿಗೂ ಪುರಾತನವಾದ ಐತಿಹಾಸಿಕ ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಪೃಕೃತಿ ರಮಣೀಯ ತಾಣದಲ್ಲಿ ನೆಲೆಸಿದೆ. ಶ್ರೀ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ನೂರಾರು ವರ್ಷಗಳಿಂದ ಈ ಕ್ಷೇತ್ರಕ್ಕೆ ಬರುತಿದ್ದಾರೆ.

ಶ್ರೀ ಮಾತೆಯನ್ನು ಯಾರು ಭಯ ಭಕ್ತಿಯಿಂದ ಆರಾಧನೆ ಮಾಡುತ್ತಾರೋ ಅವರಿಗೆ ದೇವಿ ಒಲಿಯುತ್ತಾಳೆ ಅನ್ನೋದು ಜನರ ನಂಬಿಕೆ. ಅಂದಿನಿಂದ ಇಲ್ಲಿಯವರೆಗೆ ದೇವಿ ಅದೆಷ್ಟೋ ಭಕ್ತರ ನೋವು ನಲಿವನ್ನು ಹಂಚ್ಚಿಕೊಂಡಿದ್ದಾಳೆ ಈ ದೇವಿಯನ್ನು ಶುದ್ಧ ಮನಸ್ಸಿನಿಂದ ಬೇಡಿದರೆ ಸಕಲವನ್ನೂ ಈಡೇರಿಸುತ್ತಲೇ ಅನ್ನೋದು ಪ್ರತೀತಿ.ಇಲ್ಲಿ ಪ್ರತಿವರ್ಷ ವಾರ್ಷಿಕ ಉತ್ಸವವು ಏಪ್ರಿಲ್‌ 07 ರಿಂದ 14 ರವರೆಗೆ ವಿಶುವರಗೆ ಜಾತ್ರೆಯು ಅದ್ದೂರಿಯಾಗಿ ನೆಡೆಯುತ್ತದೆ. ಹಾಗೆ ನವರಾತ್ರಿ ಉತ್ಸವವು ವಿಜಯ ದಶಮಿಯವರಗೆ ನಡೆಯುತ್ತದೆ.

ಮದುವೆ ಯೋಗ ಕೂಡಿಸುವ ದೇವಿ ಎಂದು ನಂಬಿಕೆ ಇದೆ. ಕಷ್ಟಕಾರ್ಪಣ್ಯದಿಂದ ಬೆಂದು ಬಸವಳಿದು ಬರುವ ಭಕ್ತರನ್ನು ಪೊರೆಯುವ ಈ ತಾಯಿ ಮಡಿಲಲ್ಲಿ ಸದಾ ಭಕ್ತರು ನೆರೆಯುತ್ತಾರೆ. ಮಕ್ಕಳಿಲ್ಲದವರು ದೇವಿಯ ಬಳಿ ಬಂದು ಪ್ರಾರ್ಥಿಸಿ ಕೊಳ್ಳುತ್ತಾರೆ. ಹರಕೆ ಮಾಡಿ ಕೊಂಡ ವರ್ಷದೊಳಗಡೆ ಮಗುವಾಗುತ್ತೆ ಎಂದು ಭಕ್ತಾದಿಗಳು ಹೇಳಿಕೊಳ್ಳುತ್ತಾರೆ.

ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮುಖಾಂತರ ಶಾಂತಿ ಸಂದಾನ ಪಂಚಾಯಿತಿ ಮಾಡುವ ಮೂಲಕ ಎರಡು ಕಡೆಯವರ ಗೊಂದಲ ಹಾಗೂ ಸಮಸ್ಯೆಗಳನ್ನು ನಿವಾರಿಸಿ ಎರಡು ಕಡೆಯವರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುತ್ತದೆ.

ದೇವಿಯ ಕೃಪೆಯಿಂದ ಈ ಗ್ರಾಮ ಹಾಗೂ ಸುತ್ತಮುತ್ತಲೂ ಗ್ರಾಮಸ್ಥರು ಯಾವುದೇ ಕಲಹಗಳಿಲ್ಲದೆ ಭಿನ್ನಭಿಪ್ರಾಯಗಳು ಬಂದರೆ ಶಾಂತಿಯಿಂದ ಪರಿಹಾರ ಕಂಡು ಪ್ರೀತಿ ವಿಶ್ವಾಸದಿಂದ ಬಾಳುತ್ತಿದ್ದಾರೆ.

ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಸರ್ವರಿಗೂ ಮುಕ್ತ ಪ್ರವೇಶವಿದೆ. ಪ್ರತಿ ದಿನ ಶ್ರೀ ದೇವಿಯನ್ನು ವಿವಿಧ ಅಲಂಕಾರಗಳೊಂದಿಗೆ ಶೃಂಗರಿಸಿ ಪೂಜೆ ನಡೆಸಲಾಗುತ್ತದೆ. ಉಳಿದಂತೆ ನಾಗದೇವರ, ಕ್ಷೇತ್ರಪಾಲ, ಗಣಪತಿಯ ಸಾನಿಧ್ಯವೂ ಇಲ್ಲಿದೆ.

ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ.ಕೇವಲ ಊರಿನ ಭಕ್ತರು ಮಾತ್ರವಲ್ಲದೇ ಜಿಲ್ಲೆ, ಹೊರ ಜಿಲ್ಲೆ ಹಾಗೂ 
ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಶ್ರೀ ದೇವರಲ್ಲಿ ಹರಿಕೆ ಕಾಣಿಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇಲ್ಲಿ 9 ದಿನಗಳ ಕಾಲ ನವರಾತ್ರಿ ಆಚರಣೆಯೂ ನಡೆಯುವುದು ವಿಶೇಷವಾಗಿದೆ. ನವರಾತ್ರಿಯ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಮೊದಲ ದಿನ ಸಾಯಂಕಾಲ 7.00 ಗಂಟೆಗೆ ಶೈಲಪುತ್ರಿ ಆರಾಧನೆ, ಎರಡನೇಯ ದಿನ ಸಾಯಂಕಾಲ 7.00 ಗಂಟೆಗೆ ಬ್ರಹ್ಮಚಾರಿಣಿ ಆರಾಧನೆ, ಮೂರನೇಯ ದಿನ ಸಾಯಂಕಾಲ 7.00 ಗಂಟೆಗೆ ಚದ್ರಘಂಟಾ ಆರಾಧನೆ, ನಾಲ್ಕನೇಯ ದಿನ ಸಾಯಂಕಾಲ 7.00 ಗಂಟೆಗೆ ಕೂಷ್ಮಾಂಡ ಆರಾಧನೆ, ಐದನೇಯ ದಿನ ಸಾಯಂಕಾಲ 7.00 ಗಂಟೆಗೆ ಸ್ಕಂದಮಾತಾ ಆರಾಧನೆ, ಆರನೇಯ ಸಾಯಂಕಾಲ 7.00 ಗಂಟೆಗೆ ಕಾತ್ಯಾಯಿನಿ ಆರಾಧನೆ, ಏಳನೇಯ ದಿನ ಸಾಯಂಕಾಲ 7.00 ಗಂಟೆಗೆ ಸರಸ್ವತಿ ಆರಾಧನೆ, ಎಂಟನೇಯ ದಿನಸಾಯಂಕಾಲ 7.00 ಗಂಟೆಗೆ ದುರ್ಗಾ ಆರಾಧನೆ, ಒಂಬತ್ತನೇಯ ದಿನ ಸಾಯಂಕಾಲ 7.00 ಗಂಟೆಗೆ ಮಾಹಾಗೌರಿ ಆರಾಧನೆ ನಡೆಯುತ್ತದೆ. ಪ್ರತಿದಿನ ನವರಾತ್ರಿ ಅನ್ನದಾನ ನೆರವೇರಲಿದೆ. ಹತ್ತನೆಯ ದಿನವಾದ ವಿಜಯ ದಶಮಿಯಂದು ದೇವಸ್ಥಾನದಲ್ಲಿ ಪ್ರಾರಂಭಿಕ ಪೂಜಾ ವಿಧಿವಿಧಾನಗಳ ನಂತರ ಮಹಾಮಂಗಳಾರತಿಯು ನಡೆಯುತ್ತದೆ.

ಅತ್ಯಂತ ಶಕ್ತಿಪ್ರದ ಎಂದು ನಂಬಲಾಗಿರುವ ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರವು ಆಧ್ಯಾತ್ಮ ಜೀವನ ಭಯಸುವವರಿಗೆ ನೆಚ್ಚಿನ ತಾಣವಾಗಿದೆ.

ದುರ್ಗಾ ಮಂತ್ರಗಳು ಸರ್ವ ಮಂಗಳ ಮಾಂಗಲ್ಯೇ, ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರಯಂಬಕೇ ಗೌರೀ, ನಾರಾಯಣಿ ನಮೋಸ್ತುತೇ||

ಸಿದ್ಧ ದುರ್ಗಾ ಮಂತ್ರ / ಭಯ ನಾಶ ಮಂತ್ರ ಸರ್ವ ಸ್ವರೂಪೇ ಸರ್ವೇಷೇ, ಸರ್ವ ಶಕ್ತಿ ಸಮನ್ವಿತೇ| ಭಯೇ ಭ್ಯಾಸ್ತ್ರಾಹಿ ನೋ ದೇವಿ, ದುರ್ಗೇ ದೇವಿ ನಮೋಸ್ತುತೇ||

ಸರ್ವ ಬದ್ಧ ಮುಕ್ತಿ ಮಂತ್ರ ಸರ್ವ ಬಾಧವಿನಿರ್ಮುಕ್ತೋ ಧನ್ ಧನ್ಯ ಸುತನ್ವಿತಾಃ| ಮನುಷ್ಯೋ ಮತ್ಪ್ರಸಾದೇನ್ ಭವಿಷ್ಯತಿನ ಸಂಶಯಮ್||

ಯಾ ದೇವಿ ಸರ್ವ ಭೂತೇಷು ಮಂತ್ರ ಯಾ ದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಾಃ| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ನವಾರ್ಣ ಮಂತ್ರ ಓಂ ಏಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೈ


ಸೇವೆಗಳು


ಸೇವೆಗಳ ವಿವರ:


1. ಗಣಪತಿ ಹೋಮ


2. ಕುಂಕುಮಾರ್ಚಣೆ


3. ಪುಸ್ಪಾಲಾಂಕಾರ


4. ವಸ್ತ್ರಾಲಾಂಕಾರ


5. ಲಲಿತ ಸಹಸ್ರನಾಮ


6. ಅಲಂಕಾರ ಪೂಜೆ


7. ಸಪ್ತಸತಿ ಪಾರಾಯಣ

 

8. ದುರ್ಗಾ ನಮಸ್ಕಾರ

 

9. ದೀಪಾರಾಧನೆ

 

10. ಸಾಮೂಹಿಕ ದುರ್ಗಾ ಪೂಜೆ

 

11. ರಂಗ ಪೂಜೆ

 

12. ಬೆಂಬಳಕು


13. ಹರಕೆ ಬಳಕು

 

14. ಸತ್ಯನಾರಾಯಣ ಪೂಜೆ

 

15. ದುರ್ಗಾ ಹೋಮ

 

16. ಸರಸ್ವತಿ ಪೂಜೆ

 

17. ವಸಂತ ಪೂಜೆ


18. ಇತರೆ


ಉತ್ಸವಗಳು

ನವರಾತ್ರಿ ಉತ್ಸವ: ವಿಜಯ ದಶಮಿಯವರಗೆ

ವಾರ್ಷಿಕ ಉತ್ಸವ: ಏಪ್ರಿಲ್‌ 07 ರಿಂದ 14 ರವರೆಗೆ ವಿಶುವರಗೆ

ತಿಂಗಳ ಪೂಜೆ: ಅಮಾವಾಸೆ ಹಾಗೂ ಹುಣ್ಣಿಮೆ ಪೂಜೆ

ಚೌತಿ ಪೂಜೆ

ಹುತ್ತರಿ ಪೂಜೆ

ಸಂಕ್ರಾಂತಿ ಪೂಜೆ

ವಾರ್ಷಿಕ ಅಯ್ಯಪ್ಪ ದೇವರ ಕೆರೆಯಲ್ಲಿ ಪುಣ್ಯ ಸ್ನಾನ

ಐದು ವರ್ಷಕ್ಕೋಮ್ಮೆ ಲಕ್ಷ್ಮಣ ತೀರ್ಥ ನದಿಯಲ್ಲಿ ದೇವರ ಪುಣ್ಯ ಸ್ನಾನ

ಪೂಜಾ ಸಮಯ


ಪ್ರತಿ ನಿತ್ಯ: ಬೆಳ್ಳಿಗೆ 7 ಗಂಟೆಯಿಂದ 12 ಗಂಟೆಯವರಗೆ 

ವ್ಯವಸ್ಥಾಪನ ಸಮಿತಿ


ಅಧ್ಯಕ್ಷರು: ಕಾಳಿಮಾಡ ನರೇಂದ್ರ

ಮೊ: 8105924883

ಕಾರ್ಯದರ್ಶಿ: ಬಾಚರಣಿಯಂಡ ಬೊಪ್ಪಣ್ಣ

ಮೊ: 8088071270


ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ..

ದೇವರಿಗೆ ಸಂಬಂಧ ಪಟ್ಟ ಕುಟುಂಬಗಳು...


ತಕ್ಕರು: ನೂರೇರ ಕುಟುಂಬಸ್ಥರು


ಮುಖ್ಯಸ್ಥರು: ಇಟ್ಟೀರ ಕುಟುಂಬಸ್ಥರು


ಚಂಗರು (ಭಂಡಾರ ತಕ್ಕರು): ಕಿತ್ತೀರ ಕುಟುಂಬಸ್ಥರು


ಬಾಚರಣಿಯಂಡ 

ಬೊಳ್ಳಿಮಾಡ 

ಮಲ್ಲಂಗಡ 

ಬಾಳೆರ

ಮಲ್ಲೇಂಗಡ

ಬೊಳ್ತಂಗಡ

ಪಂದಿಮಾಡ

ಚೆಕ್ಕೇರ

ಕಾಳಿಮಾಡ


ದೇಣಿಗೆ


ಅಕೌಂಟ್‌ ಡಿಟೈಲ್ಸ್:‌

Name: SREE  DHURGAAPARAMESHWARI  TEMPLE

A/C. No: 52010161660732

Bank Name: Union Bank of India

IFSC Code: UBINO900842

Branch. Hudikeri

ಸಂಪರ್ಕ


ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಬೆಳ್ಳೂರು ಗ್ರಾಮ

ಹೈಸೊಡ್ಲೂರು ಅಂಚೆ - 571249

ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು.

ಪೊನ್ನಂಪೇಟೆ ತಾಲ್ಲೂಕು

ಕೊಡಗು.

ಮೊ: 8088071270

ದೇವಾಲಯದ ಗೂಗಲ್ ಮ್ಯಾಪ್ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.