ಶ್ರೀ ಶಾಸ್ತಾವು ದೇವಸ್ಥಾನ, ಪೆರಾಜೆ
ದೇವಾಲಯದ ಬಗ್ಗೆ
ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನವು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 2000 ವರ್ಷಗಳಷ್ಟು ಪುರಾತನವೆಂಬ ನಂಬಿಕೆಯಿದೆ. ಒಂದು ದಿಕ್ಕಿನಲ್ಲಿ ತಲಕಾವೇರಿಯ ಬ್ರಹ್ಮಗಿರಿಯೊಂದಿಗೆ ಸ್ಪರ್ಧಿಸುವಷ್ಟು ಎತ್ತರದ ಕೋಳಿಕಮಲೆ. ಇನ್ನೊಂದು ದಿಕ್ಕಿನಲ್ಲಿ ಸಂಪತ್ ಸಮೃದ್ಧ ಪೂಮಲೆ. ಮುಂದೆ-ಹಿಂದೆ ಸುತ್ತಲೂ ಇರುವ ಹಳ್ಳ-ಕೊಳ್ಳ ಕಾಡು ಬೆಟ್ಟಗಳೆಡೆಯಲ್ಲಿ ಕೃಷಿಕ ಸಮುದಾಯದ ಪರಿಶ್ರಮದಿಂದ ತಲೆಯೆತ್ತಿದ ಹಸಿರು ತೋಟಗಳು ಇವೆಲ್ಲವುಗಳ ಜೀವರಸವಾಹಿನಿಯಾಗಿ ಹರಿಯುವ ಪಯಸ್ವಿನಿ ನದಿಯ ತಟದಲ್ಲಿ ಪ್ರಶಾಂತ ವಾತಾವರಣ ಹೊಂದಿದ ಶ್ರೀ ಶಾಸ್ತಾವು ದೇವಸ್ಥಾನವು ಈ ಊರಿನ ಮತ್ತು ಪರವೂರಿನ ಜನರ ಆಸ್ತಿಕ ಭಾವನೆಗಳನ್ನು ಪ್ರಕಾರಗೊಳಿಸುವ ಕೇಂದ್ರವಾಗಿದೆ .
ಈ ಹಿಂದೆ ಮೂರು ಬಾರಿ ಸಂಪೂರ್ಣ ನಶಿಸಿ ಮತ್ತೆ ಪುನರ್‌ನವೀಕರಣಗೊಂಡಂತಹ ಕ್ಷೇತ್ರವೆಂಬುದು ಅಷ್ಟಮಂಗಲ ಪ್ರಶ್ನೆಯ ಆಧಾರದಲ್ಲಿ ತಿಳಿದು ಬಂದಿರುವುದು. ಸುಮಾರು 300 ವರ್ಷಗಳಿಂದೀಚೆಗೆ ಹುಲ್ಲು ಹಾಸಿನ ಮಾಡಿನಿಂದ ಇದ್ದಿರುವ ದೇವಸ್ಥಾನವನ್ನು ನಂತರ ಹೆಂಚು ಹಾಕಿ ನಿರ್ಮಿಸಿರುವುದಕ್ಕೆ ಸಾಕಷ್ಟು ಪುರಾವೆ ಆಧಾರ ಕಂಡು ಬರುವುದು. ಹಾಲೇರಿ ವಂಶದ ಲಿಂಗರಾಜನೆಂಬ ಅರಸನು ಆನೆಯ ಮೇಲೆ ಬಂದು ಜಾತ್ರೆಯನ್ನು ನಡೆಸುತ್ತಿದ್ದನು ಎಂಬುದು ಹಿರಿಯರ ಅಭಿಪ್ರಾಯ.
ಪೆರಾಜೆ ಎಂಬ ದೇವ ಭೂಮಿಯಲ್ಲಿ ಅತೀ ಪೌರಾಣಿಕ ಕಾಲದಿಂದಲೇ ಪ್ರಭಾ, ಸತ್ಯಕ, ಶಾಸ್ತಾವು ದೇವ ಸಾನಿಧ್ಯಗಳ ಮತ್ತು ದೈವಗಳ ಆರಾಧನೆಯು ಊರ ಮಹಾಜನರ ಐಕ್ಯ, ಮತ್ಯ ಬುದ್ಧಿಯಿಂದಲೂ, ಭಕ್ತಿ, ವಿಶ್ವಾಸ, ಶ್ರದ್ಧೆ ಮತ್ತು ನಂಬಿಕೆಯಿಂದ ನಡೆದು ಬಂದಿರುತ್ತದೆ. ಇಲ್ಲಿ ಶ್ರೀ ಶಾಸ್ತಾವು ದೇವರು ಪ್ರಧಾನವಾಗಿದ್ದು ʼಶನಿಗೆ ವಿಶೇಷʼ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿರುವುದು. ದೈವಗಳ ಆರಾಧನೆಯಲ್ಲಿ ʼಶ್ರೀ ಕರಿಭೂತ ಕೋಮಾಳಿʼ ಭಕ್ತರ ನಂಬಿಕೆಯ ದೈವವಾಗಿದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯವಾಗಿರುವುದರಿಂದ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯೇ ಹೆಚ್ಚಾಗಿರುವುದು ಮತ್ತು ಧನಕನಕ ಒದಗಿ ಬರುವುದು ವಾಸ್ತವ ವಿಚಾರವಾಗಿದೆ.
ಸೇವೆಗಳು
ಸೇವೆಗಳ ವಿವರ:
ರುದ್ರಾಭಿಷೇಕ 50-00
ಶನಿಪೂಜೆ 100-00
ಮಹಾಪೂಜೆ 350-00
ಕಾರ್ತಿಕ ಪೂಜೆ ದೊಡ್ಡದು 200-00
ಕಾರ್ತಿಕ ಪೂಜೆ ಸಣ್ಣದು 200-00
ಕಡು ಪಾಯಸ 50-00
ಪಂಚಕಜ್ಜಾಯ 10-00
ಅಪ್ಪ ಕಜ್ಜಾಯ 75-00
ಶಾಸ್ತಾವು ಹಣ್ಣುಕಾಯಿ 2-00
ಗಣಪತಿ ಹಣ್ಣುಕಾಯಿ 2-00
ಅನ್ನಪೂರ್ಣೇಶ್ವರಿ ಹಣ್ಣುಕಾಯಿ 2-00
ಕರಿಭೂತ ಹಣ್ಣುಕಾಯಿ 4-00
ಕರಿಭೂತ ನಗದು ಹಣ್ಣುಕಾಯಿ 60-00
ಕರಿಭೂತ ಹರಕೆ ಕೋಲ(1ರ) 200-00
ಹಣ್ಣುಕಾಯಿ ನಗದು 30-00
ನಗದು ಬಲಿವಾಡ 50-00
ಬಲಿವಾಡ ರಶೀದಿ 5-00
ಮಂಗಳಾರತಿ 3-00
ಸತ್ಯನಾರಾಯಣ ಪೂಜೆ 1200-00
ಅನ್ನಸಂತರ್ಪಣೆ 50-00
(ಒಂದು ಎಲೆಗೆ)
ಕುಂಕುಮಾರ್ಚನೆ 25-00
ಗರಿಕೆ ಹೋಮ 250-00
ಗಣಪತಿ ಹೋಮ 500-00
ಹೂನಿನ ಪೂಜೆ 50-00
ಕಲಶ ಸ್ನಾನ 10-00
ವಾಹನ ಪೂಜೆ 50-00 ,100-00
ನಿತ್ಯ ಪೂಜೆ 200-00
(ಒಂದು ಹೊತ್ತಿನ)
ತ್ರಿಮಧುರ ನೈವೇದ್ಯ 60-00
ಕ್ಷೀರಾಭಿಷೇಕ 50-00
ಬಿಲ್ವಾರ್ಚನೆ 50-00
ಪಂಚಾಮೃತ ಅಭಿಷೇಕ 50-00
ಕ್ಷೀರ ಪಾಯಸ 75-00
ನಾಗ ತಂಬಿಲ 250-00
(ನಾಗರ ಪಂಚಮಿಯಂದು)
ನಾಗ ತಂಬಿಲ 500-00
(ಇತರ ದಿನದಂದ)
ಸರ್ವಸೇವೆ 125-00
ರಂಗಪೂಜೆ 2501-00
ತೀರ್ಥ ಬಾಟ್ಲಿ 10-00
ಎಳ್ಳಣ್ಣೆ(100 ML) 30-00
ಪಂಚಮಿ ಪೂಜೆ 150-00
ನಾಗನಿಗೆ ಹಾಲು 10-00
ಗಣಪತಿ ಪೂಜೆ 60-00
ದತ್ತಿ ಪೂಜೆ 1001-00
ಏಕಾದಶ ರುದ್ರಾಭಿಷೇಕ 750-00
ಸ್ಥಳ ಕಾಣಿಕೆಗಳು :
ರಾಹು ಜಪ 50-00
ಕೇತು ಜಪ 50-00
ಶನಿ ಜಪ 50-00
ಮೃತ್ಯುಂಜಯ ಹೋಮ 1000-00
ನವಗ್ರಹ ಶಾಂತಿ ಹೋಮ 1000-00
ದುರ್ಗಾ ಪೂಜೆ 250-00
ಮೃತ್ಯುಂಜಯ ಜಪ 150-00
ಬಣಲೆ ಸೇರಿ
ಸರಸ್ವತಿ ಪೂಜೆ 250-00
ತುಲಾಭಾರ 501-00
(ದೇವರ ದರ್ಶನ ಬಲಿ ದಿನ ಮಾತ್ರ)
ಪ್ರಾರ್ಥನ ಕಾಣಿಕೆ 200-00
ಶುಭ ಕಾರ್ಯಗಳಿಗೆ 500-00
0 Comments